You are here
 
 

Blogs

Mugulunage song

ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?
ನಗುವ ಮೊದಲೇ ಬರುವೆ, ಅಳುವ ನಡುವೆ ಇರುವೆ ನೂರು ಮಾತು ಅನುವೆ.
ಮಾತೇ ಆಡದೇ ಹೊಳೆವೆ ಹೇಳದೇನೇ ಬರುವೆ,
ಬಾಳಿನುದ್ದಕೂ ಇರುವೆ.. ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?
ಮುಗುಳು ನಗೆಯೇ ನೀ ಏಕೆ ಹೀಗೆ? ನೀ ಏಕೆ ಹೀಗೆ?...
ಮೊದಲ ನೆನಪಿಗೂ ನೀನೇ, ಕೊನೆಯ ನೆನಪಿಗೂ ನೀನೇ,
ಮಧುರ ಕನಸಿಗೂ ನೀನೇ, ಕೊನೆಯ ಕನಸಿಗೂ ನೇನೇ,
ನೀನು ಸದ್ದೇ ಇರದ ಸೋನೆಯಂತೆ,
ಬುದ್ಧಿಯಿರದ ಜ್ಞಾನಿಯಂತೆ...
ಹೂವು ಕಂಡರೂ ನಲಿವೆ, ನೂವು ಬಂದರೂ ನಗುವೆ,
ಯಾವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಂತಿರುವೆ...
ಯಾವುದನೂ ಎಷ್ಟೆಲ್ಲಾ ಬಚ್ಚಿಕೊಂಡಿರುವೆ...
ನಗಬೇಡ ದಯಾಮಾಡಿ ಹೇಳುವೆಯಾ ಒಮ್ಮೆ?

Mugulunage

ಗಣೇಶ್-ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ತಯಾರಾಗಿದೆ..ಇವರಿಬ್ಬರೂ ಕೂಡಿ ಹೊಸ ಚಿತ್ರವೊಂದನ್ನು ಮಾಡುತ್ತಿದ್ದು, ಅದರ ಶೀರ್ಷಿಕೆ:'ಮುಗುಳು  ನಗೆ'
ಲಭ್ಯವಿರುವ ಮಾಹಿತಿಯ ಪ್ರಕಾರ ಈ ಚಿತ್ರವನ್ನು ಗಣೇಶ್ ಮತ್ತು ಯೋಗರಾಜ್ ಭಟ್ಟ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಗಣೇಶ್ ಜೊತೆ ನಾಯಕಿಯರಾಗಿ ನಾಲ್ಕು ನಟಿಯರು ಆಯ್ಕೆ ಆಗಿದ್ದಾರೆ..

'ಮುಂಗಾರುಮಳೆ','ಗಾಳಿಪಟ' ಯಶಸ್ಸಿನ ನಂತರ ಒಂದಾಗಿರುವ ಈ ಜೋಡಿಗೆ ಒಂದು 'Best of luck !!'

National anthem to be played in theaters

ದೇಶದ ಎಲ್ಲಾ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ ಎಂದು ಸುಪ್ರೀಮ್ ಕೋರ್ಟ್ ಆದೇಶಿಸಿದೆ..

ಸುಪ್ರೀಂಕೋರ್ಟ್ ಆದೇಶದಂತೆ ಇನ್ಮುಂದೆ ಚಿತ್ರಮಂದಿರಗಳಲ್ಲಿ ಪ್ರತಿ ಚಿತ್ರ ಪ್ರದರ್ಶನ ಆರಂಭಕ್ಕೂ ಮುನ್ನ ರಾಷ್ಟ್ರಧ್ವಜ ಪ್ರದರ್ಶಿಸಬೇಕು ಹಾಗೂ ರಾಷ್ಟ್ರಗೀತೆ ಮೊಳಗಿಸಿ ಗೌರವ ಸಲ್ಲಿಸಬೇಕಿದೆ.

ರಾಷ್ಟ್ರಗೀತೆ 'ಜನ ಗಣ ಮನ' ಮೊಳಗುವ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿರುವ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು.

Pages