You are here
 
 

ಕಿರಿಕ್ ಹುಡುಗಿಯ ಒಂದಲ್ಲ, ಎರಡಲ್ಲ, ಮೂರು ಸಿನಿಮಾಗಳು ತೆರೆ ಕಾಣಲಿವೆ !!!

ಕಳೆದ ವರ್ಷ ಇದೆ ಸಮಯಕ್ಕೆ ರೀಲೀಸ್ ಆಗಿ ಜನಪ್ರಿಯ ಗಳಿಸಿದ ಚಿತ್ರ "ಕಿರಿಕ್ ಪಾರ್ಟಿ" ಯಲ್ಲಿ "ಸಾನ್ವಿ " ಪಾತ್ರಕ್ಕೆ ಜೀವ ತುಂಬಿ ಜನ ಮನ್ನಣೆ ಗಳಿಸಿದ ನಟಿ "ರಶ್ಮಿಕಾ ಮಂದಣ್ಣ "ಮತ್ತೆ ಒಂದಲ್ಲ ಎರಡಲ್ಲ ಮೂರು ಸಿನೆಮಾಗಳೊಂದಿಗೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ .ಪುನೀತ್ ರಾಜ್​ಕುಮಾರ್ ಜತೆ ‘ಅಂಜನಿಪುತ್ರ’ ಹಾಗೂ ಗಣೇಶ್ ಜತೆ ‘ಚಮಕ್’ನಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಜತೆಗೆ ತೆಲುಗಿನ ‘ಚಲೋ’ ಚಿತ್ರದಲ್ಲೂ ಅವರಿದ್ದಾರೆ. ಈ ಎಲ್ಲ ಸಿನೆಮಾಗಳು ಇದೆ ಡಿಸೆಂಬರ್ ನಲ್ಲಿ ತೆರೆಕಾಣಲಿವೆ .
ರಶ್ಮಿಕಾ ಅವರು ‘ಅಂಜನಿ ಪುತ್ರ’ದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ .ಚಮಕ್’ನಲ್ಲಿ ತುಂಬ ಮೃದು ಸ್ವಭಾವದ ಗೃಹಿಣಿಯ ಪಾತ್ರ. ‘ಚಲೋ’ದಲ್ಲಿ ಕಾಲೇಜ್​ಗೆ ಹೋಗುವ ಹುಡುಗಿ ಪಾತ್ರ. ಹೀಗೆ ಪ್ರತಿಯೊಂದು ಪಾತ್ರವು ವಿಭಿನ್ನ ವಾಗಿದ್ದು , ಪ್ರೇಕ್ಷಕರಿಗೆ ಮನರಂಜಿಸಲಿದೆ.