You are here
 
 

ಚಿತ್ರೀಕರಣ ಮುಗಿಸಿದ ಟಗರು- Tagaru completed shooting

ಹ್ಯಾಟ್ರಿಕ್ ಹೀರೊ ಶಿವರಾಜ್‍ಕುಮಾರ್ ನಟಿಸಿರುವ 'ಟಗರು' ಚಿತ್ರ ತಂಡ ಚಿತ್ರೀಕರಣವನ್ನು ಮುಗಿಸಿದೆ.ಬೆಂಗಳೂರಿನ ಗವಿಪುರಂನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಕುಂಬಳಕಾಯಿ ಒಡೆಯುವುದರ ಮೂಲಕ ಚಿತ್ರದ ಚಿತ್ರೀಕರಣ ಪೂರ್ಣ ಮಾಡಿದೆ. ದುನಿಯಾ ಸೂರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಿವಣ್ಣ ಪೋಲೀಸ್ ಅಧಿಕಾರಿಯಾಗಿ ಕಣಿಸಿಕೊಳ್ಳಲಿದ್ದಾರೆ. ಮಾನ್ವಿತ ಹರೀಶ್ ಮತ್ತು ಭಾವನ ನಾಯಕಿಯ ಪಾತ್ರದಲ್ಲಿದ್ದಾರೆ.