Events : Pt Bhimsen Joshi 10th Punyathithi
Pt Bhimsen Joshi 10th Punyathithi

Date

Sunday, 31 January 2021

Time

6:00 PM

Location

Dharwad

Info

ಸಂಗೀತವೆಂಬುದು ಸಮುದ್ರ ಇದ್ದಂತೆ. ಅದರಲ್ಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಭಾರತದ ಅನನ್ಯತೆ. ಈ ಅನನ್ಯ ಕಲೆಯಲ್ಲಿ ತನ್ನದೇ ಛಾಪು ಮೂಡಿಸಿ ಧಾರವಾಡ ಮಣ್ಣಿನ ಸೊಗಡನ್ನು, ಕರ್ನಾಟಕದ ಕೀರ್ತೀಯನ್ನು ಜಗದಾದ್ಯಂತ ಶ್ರೋತೃಗಳಿಗೆ ನಾದದ ಮೂಲಕ ತಲುಪಿಸಿದವರು ಭಾರತರತ್ನ ಪಂ. ಭೀಮಸೇನ ಜೋಶಿ.
ಮಹಾಭಾರತದ ಭೀಮಸೇನ ಎಂದರೆ ನೆನಪಾಗುವುದು ಬಲ ಮತ್ತು ಶೌರ್ಯ. ನಾದಭಾರತದಲ್ಲಿ ಭೀಮಸೇನ ಎಂದರೆ ಸ್ವರ ಮಾಧುರ್ಯ.
ಜೋಶಿ ಸಂಗೀತದ ಧ್ರುವತಾರೆ ಎಂದರೆ ಅತಿಶಯೋಕ್ತಿ‌ ಅಲ್ಲ. ಅವರೊಂದು ಷಡ್ಜಸ್ವರವೇ !!
ಕೇವಲ ಶಾಸ್ತ್ರೀಯ ಸಂಗೀತದಲ್ಲಿ ಸ್ಥಾಯಿಯಾಗದೇ ಭಕ್ತಿ, ಭಜನೆ ಮೊದಲಾದ ಪ್ರಕಾರಗಳಲ್ಲಿಯೂ ಸಂಚಾರಿಯಾಗಿ ಜನಮಾನಸದಲ್ಲಿ ನಾದದ ನಂದದ ಆನಂದದ ಜ್ಯೋತಿ, ಭೀಮಸೇನ ಜೋಶಿ.
ಸಂಜೆಯ ಶುದ್ಧ ಕಲ್ಯಾಣ್, ಬೆಳಗಿನ ಕೋಮಲ್ ರಿಷಭ್ ಅಸಾವರಿ, ರಾತ್ರಿಕಾಲದ ಮಾಲಕಂಸ ಅವರಿಗೆ ಆಪ್ಯಾಯಮಾನವಾದ ಪ್ರೀತಿಯ ರಾಗಗಳು.
ಅವರು ಸದಾ ನಮ್ಮ ಹೃದಯಲ್ಲಿ ರುವರು, ಇಂದಿಗೂ ಪಂಡಿತರೂ ನಂಬುವ ನಾದದೇವತೆ, ಅವರ ಹಾಡುಗಳು ರಸಿಕರಿಗೆ ತುಂಗಾಪಾನದಂತೆ..ಗಂಗಾಸ್ನಾನ ದಂತೆ.

ಈಗಲಾದರೂ ಸಹ ಭೀಮಸೇನ ಜೋಶಿ ಹೆಸರು ಹೇಳಿದರೆ ಸಂಗಿತದ ಕಿವಿ ನೆಟ್ಟಗಾಗುತ್ತದೆ. ಏಕೆಂದರೆ ನಾದ ಅವಿನಾಶಿ.ಅವಿನಾಶಿಯಾದ ನಾದವನ್ನು ಜೀವನವನ್ನಾಗಿಸಿಕೊಂಡಿದ್ದವರು ಭೀಮಸೇನ ಜೋಶಿ.
ಗಾನಗಂಧರ್ವ ಪಂ. ಭೀಮಸೇನ ಜೋಶಿಯವರ ಸ್ಮೃತಿ ಹಾಡುಗಾರರಿಗೆ ಭೀಮಬಲ ತರುವಂಥದ್ದು..ಕೇಳುಗರನ್ನೂ ಸೂಜಿಗಲ್ಲಂತೆ ಸೆಳೆಯುವಂತದ್ದು..
ಈಗ ಅವರ ಶರೀರ ಶಾರೀರದ ಮೂಲಕ ಅಮರವಾಗಿ ಹತ್ತು ವರ್ಷ.
ಸ್ವರಭಾಸ್ಕರ ಪಂಡಿತ್. ಭೀಮಸೇನ ಜೋಶಿ ಅವರ ಹತ್ತನೇ ಪುಣ್ಯ ಸ್ಮರಣೆ ನಿಮಿತ್ತ ಧಾರವಾಡದ ಭಾರತೀಯ ಸಂಗೀತ ವಿದ್ಯಾಲಯವು ದಿನಾಂಕ 31.01.2021 ರಂದು ಧಾರವಾಡದ "ಸೃಜನಾ ರಂಗಮಂದಿರ" ದಲ್ಲಿ ಸಂಜೆ 6 ಗಂಟೆಗೆ "ಸ್ವರ ಗಂಧರ್ವ " ಕಾರ್ಯಕ್ರಮ ಆಯೋಜಿಸಿದೆ.

ನಾಡಿನ ಹೆಸರಾಂತ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿಯವರ ಗಾನ ಸುಧೆಯಿದ್ದು, ಶ್ರೀ ಫಾರೂಕ್ ಲತೀಫ್ ಖಾನ್ ಅವರ ಸಾರಂಗಿಯಲ್ಲಿ ಜೊತೆಯಾಗಲಿದ್ದಾರೆ. ತಬಲಾದಲ್ಲಿ ಶ್ರೀ ಕೇಶವ ಜೋಶಿಯವರ ಸಾಥಿಯಿದೆ, ಶ್ರೀ ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ.

ಬನ್ನಿ ಸ್ವರಭಾಸ್ಕರನ ಸ್ಮರಣೆಯಲ್ಲಿ ಪಾಲ್ಗೊಳ್ಳಿ.

- ಭಾರತೀಯ ಸಂಗೀತ ವಿದ್ಯಾಲಯ ಧಾರವಾಡ.

ಸೂಚನೆ: ಕೋವಿಡ್ ನಿಯಮಕ್ಕನುಗುಣವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ. 
---------------------------------------------------------------------------------------
 Date :- 31 Jan 2021
Time :- 6:00 PM
Location :- Srujana Rangamandira, KCD Campus
-----------------------------------------------------------------------------------------

Please Note

Event timings may vary slightly

Address

Srujana Rangamandira, KCD Campus, , Dharwad, Karnataka-580007

MAP