ಮಹಿಳಾ ದಿನ ವಿಶೇಷ ಆರೋಗ್ಯ ಜಾಗೃತಿ ಸಂವಾದ ಮಾ. 18ಕ್ಕೆಶಿವಮೊಗ್ಗ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪಂಚಮಿ ಆಯುರ್ವೇದ ಚಿಕಿತ್ಸಾ ಕೇಂದ್ರದ ವತಿಯಿಂದ ಕುವೆಂಪು ರಸ್ತೆಯಲ್ಲಿ ಗುತ್ತಿ ನರ್ಸಿಂಗ್ ಹೋಂ ಎದುರು ಇರುವ ಪಂಚಮಿ ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ಮಾರ್ಚ್ 18ರಂದು ಸಂಜೆ 5ರಿಂದ 8ರವರೆಗೆ ಮಹಿಳಾ ಆರೋಗ್ಯದ ಕುರಿತು ವಿಶೇಷ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮುಟ್ಟಿನ ಸಮಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಕುರಿತು ಚರ್ಚೆ, ಔಷಧಿ, ಯೋಗ, ಮುದ್ರೆ ಹಾಗೂ ಆಧ್ಯಾತ್ಮಿಕ ಚಿಂತನೆ ಮೂಲಕ ಹೇಗೆ ನಮ್ಮನ್ನು ನಾವು ಬೊಜ್ಜು, ಆತಂಕ, ಮೂಳೆ ನೋವು, ಖಿನ್ನತೆ ಸೇರಿದಂತೆ ಇತರೆ ಸಮಸ್ಯೆಗಳಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಂವಾದ ನಡೆಯಲಿದೆ.
ಮಹಿಳಾ ಆರೋಗ್ಯ ಜಾಗೃತಿ ಸಂವಾದಲ್ಲಿ ವೈದ್ಯರಾದ ಡಾ. ಕಾಂಚನ್ ಕುಲಕರ್ಣಿ, ಡಾ. ಆಶಾ, ಡಾ. ಚೈತ್ರಾ, ಯೋಗಶಿಕ್ಷಕಿ ಸಿ.ಅರುಣಾ, ತರಬೇತುದಾರರಾದ ಪದ್ಮಾವತಿ ಭಾಗವಹಿಸಲಿದ್ದಾರೆ. ಮುಟ್ಟಿನ ಸಮಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸಂವಾದದಲ್ಲಿ ಪಾಲ್ಗೊಳ್ಳುವ ಆಸಕ್ತರು
9900595955 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಸಬೇಕು. ಮೊದಲು ನೋಂದಣಿ ಮಾಡಿಸುವ 30 ಜನರಿಗೆ ಸಂವಾದದಲ್ಲಿ ಪಾಲ್ಗೊಳ್ಳಲು ಅವಕಾಶ ಇರುತ್ತದೆ.