Blog : Aava Kulavo Ranga Song
Aava Kulavo Ranga Song

ಶ್ರೀ ಶ್ರೀ  ವಾದಿರಾಜತೀರ್ಥ ವಿರಚಿತ "ಆವ ಕುಲವೋ ರಂಗಾ " ಕೀರ್ತನೆ. 

ಆವ ಕುಲವೋ ರಂಗಾ
ಅರಿಯಲಾಗದು ।।ಪ।।

ಆವ ಕುಲವೆಂದರಿಯಲಾಗದು
ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು
ಹೂವ ಸತಿಗೆ ತಂದನಂತೆ||1||


ಗೋಕುಲದಲ್ಲಿ ಹುಟ್ಟಿದನಂತೆ
ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ
ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ
ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿ‌ಯೊಳಗಿರೇಳು ಲೋಕವ
ಇರಿಸಿ ತಾಯಿಗೆ ತೋರ್ದನಂತೆ ||2||

ಗೊಲ್ಲತಿಯರ ಮನೆಗೆ ಪೊಕ್ಕು
ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು
ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ
ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ
ಮುದ್ದುಮುಖದ ಚೆಲ್ವನಂತೆ ||3||

ಕರಡಿ ಮಗಳ ತಂದನಂತೆ
ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ
ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ
ಕಡಲದಡೆಯಲಿ ನಿಂದನಂತೆ

ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ||4||