Blog : ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು (About ayurvedic medicines)
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು (About ayurvedic medicines)

ಈಗ ಕೊರೊನ ವೈರಸ್ ಆರ್ಭಟ ದಿನ ದಿನಕ್ಕೂಹೆಚ್ಚಾಗುತ್ತಿದೆ.ಜನರು ಈ ಸಂದರ್ಭದಲ್ಲಿ
ಕಡ್ಡಾಯವಾಗಿ ಮಾಸ್ಕ ಧರಿಸುವುದು,ಅಂತರ ಕಾಪಾಡಿಕೊಳ್ಳುವುದು ಜೊತೆಗೆ ಅನಿವಾರ್ಯ ಇದ್ದಾಗ ಮಾತ್ರ ಹೊರಗಡೆ ಹೋಗುವುದು.ಒಂದು ಚಿಕ್ಕ ನಿರ್ಲಕ್ಷ್ಯ ಮಾಡಿದರೂ,ದೊಡ್ಡ ಆಪತ್ತು ತರಬಹುದು.ಇದನೆಲ್ಲಾ ಪಾಲನೆ ಮಾಡುವದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆಯೂ ಗಮನ ನೀಡಬೇಕು. ಆಯುರ್ವೇದವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರವಹಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಗಳು
೧: ದಿನಾ ಬೆಳಗ್ಗೆ 1 ಚಮಚ ಚವ್ಯನಪ್ರಾಶ ತೆಗೆದುಕೊಳ್ಳಿ. ಮಧುಮೇಹ ಇರುವವರು ಶುಗರ್‌ಲೆಸ್‌ ಚವ್ಯನಪ್ರಾಶ ತೆಗೆದುಕೊಳ್ಳಿ.
೨:ಒಂದು ಲೀಟರ್ ನೀರಿಗೆ ಜೀರಿಗೆ, ಚಕ್ಕೆ, ಲವಂಗ, ಒಣ ಶುಂಠಿ, ಒಣ ದ್ರಾಕ್ಷಿ, ಬೆಲ್ಲ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರೆಲ್ಲಾ
ಒಂದೊಂದು ಲೋಟಾ ಕುಡಿಯಿರಿ .
೩:ಆಯುಷ್‌ ಇಲಾಖೆಯವರು ಆಯುಷ್ ಕಾತಾ ಎಂಬ ಕಷಾಯ ಪುಡಿಯನ್ನು ಸಿದ್ದಪಡಿಸಿದ್ದಾರೆ, ಅದು ಎಲ್ಲಾ ಆಯುರ್ವೇದಿಕ್ ಅಂಗಡಿಗಲ್ಲಿ ಸಿಗುತ್ತದೆ ಈ ಕಷಾಯ ಪುಡಿಯನ್ನು ಒಂದು ಲೀಟರ್ ನೀರಿಗೆ ಹಾಕಿ ಅರ್ಧ ಲೀಟರ್ ಆಗುವಷ್ಟು ಕುದಿಸಿ, ಅದಕ್ಕೆ ಸ್ವಲ್ಪ ನೀಂಬೆ ರಸ ಸೇರಿಸಿ ಮನೆಯವರೆಲ್ಲಾ ಒಂದೊಂದು ಲೋಟಾ ಕುಡಿಯಿರಿ .
೪:ಒಣಕೆಮ್ಮು,ಗಂಟಲು ಕೆರೆತ ಇದ್ರೆ ಲವಂಗ ಪುಡಿಯನ್ನುಒಂದು ಚಮಚ ಜೇನಿನಲ್ಲಿ ಮಿಶ್ರ ಮಾಡಿ ದಿನದಲ್ಲಿ ಒಮ್ಮೆ ತೆಗೆದುಕೊಳ್ಳಿ.
೫:ಕುದಿಯುವ ನೀರಿಗೆ ಪುದೀನಾ ಎಲೆ ಅಥವಾ ಅಜ್ವೈನ್ ಹಾಕಿ ಹಬೆ ತೆಗೆದುಕೊಳ್ಳಿ, ಈ ರೀತಿ ದಿನದಲ್ಲಿ ಒಮ್ಮೆ ಮಾಡಿ.