Blog : Badanekayi Fry Recipe | Brinjal Fry | Kannada
Badanekayi Fry Recipe | Brinjal Fry | Kannada

ಬದನೇಕಾಯಿ ಫ್ರೈ ತುಂಬಾ ರುಚಿಕರವಾದ ಖಾದ್ಯ.
ಇದನ್ನು ಊಟದಲ್ಲಿ ಮಾಡಬಹುದು ಅಥವಾ ಸಂಜೆ ಛಾ ಜೊತೆಗೆ ಸವಿಯಬಹುದು.
ಬದನೇಕಾಯಿ ಫ್ರೈ ಮಾಡಲು ಸುಲಭ ಕೂಡ. ಬೇಗನೆ ಮಾಡಬಹುದು.

ಬದನೇಕಾಯಿ ಫ್ರೈ ಮಾಡಲು ಏನು ಬೇಕು?:


1. ದೊಡ್ಡ ಬದನೇಕಾಯಿ (ಕರಿಯ ಬದನೆ ಆದರೆ ಉತ್ತಮ )
2. ಬೇಯಿಸಲು ಎಣ್ಣೆ
3. ರುಚಿಗೆ ಉಪ್ಪು
4. ಕಾರ್ನ್ ಹಿಟ್ಟು / ಇಲ್ಲಾಂದ್ರೆ ಅಕ್ಕಿ ಹಿಟ್ಟು
5. ಖಾರದ ಪುಡಿ
6. ಅರಿಶಿನ ಪುಡಿ
7. ನೀರು

ಬದನೇಕಾಯಿ ಫ್ರೈ ಮಾಡುವದು ಹೇಗೆ? :


1. ದಪ್ಪ ಬದನೆಕಾಯಿ ಚನ್ನಾಗಿ ತೊಳೆದು ಗುಂಡಗೆ ಹೆಚ್ಚಿ (ಗಾಲಿ ಗಾಲಿ ಆಗಿ)
2. ಒಂದು ಬುಟ್ಟಿಯಲ್ಲಿ ಕಾರ್ನ್ ಹಿಟ್ಟು /ಅಕ್ಕಿ ಹಿಟ್ಟು, ಖಾರದಪುಡಿ, ಉಪ್ಪು, ಅರಿಷಣಪುಡಿ ಹಾಕಿ ಕಲಸಿ
3. ಈ ಹಿಟ್ಟನ ಮಿಶ್ರಣಕ್ಕೆ ನೀರು ಹಾಕಿ ಗಂಟಿಲ್ಲದಂತೆ ಕಲಿಸಿ. ಭಜಿ ಮಾಡುವ ಹಿಟ್ಟಿನ ಹದಕ್ಕೆ ಇರಲಿ
4. ಈಗ ಬದನೇಕಾಯಿ ಗಾಲಿಗಳನ್ನು ಹಿಟ್ಟನ ಮಿಶ್ರಣದಲ್ಲಿ ಅದ್ದಿ
5. ವಲೆ ಮೇಲೆ ಒಂದು ಪಾನ್ ಇಟ್ಟು ಒಂದೆರಡು ಚಮಚ ಎಣ್ಣೆ ಹಾಕಿ ಸವರಿ
6. ಹಿಟ್ಟಿನಲ್ಲಿ ಅದ್ದಿದ ಬದನೇಕಾಯಿ ಗಾಲಿಗಳನ್ನು ನಿಧಾನಕ್ಕೆ ಕಾದಿರುವ ಎಣ್ಣೆ ಮೇಲೆ ಹಾಕಿರಿ
7. ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿರಿ. ಒಂದು ಕಡೆ ಬೆಂದ ಮೇಲೆ ಫೋರ್ಕ್ ಅಥವಾ ಕಡ್ಡಿಯ ಸಹಾಯದಿಂದ ಬದನೆಕಾಯಿಯನ್ನು ತಿರುಗಿಸಿ ಹಾಕಿ ಬೇಯಿಸಿರಿ
8. ಹೊರಳಿ ಹಾಕಿದ ಮೇಲೆ ಒಂದು ಚಮಚ ಬದನೆಕಾಯಿಯ ಗಾಲಿಯ ಮೇಲೆ ಹಾಕಿ
9. ಬಿಸಿ ಬಿಸಿ ಬದನೇಕಾಯಿ ಫ್ರೈ ರೆಡಿ

ಟಿಪ್ಸ್:


1. ಬದನೇಕಾಯಿ ಗಾಲಿಗಳು ಆದಷ್ಟು ತೆಳ್ಳಗೆ ಇರಲಿ
2. ಹೆಚ್ಚಿದ ನಂತರ ನೀರಿನಲ್ಲಿ ಹಾಕಿಟ್ಟರೆ ಕಪ್ಪಗೆ ಆಗುವದಿಲ್ಲ
3. ಬದನೇಕಾಯಿ ಫ್ರೈ ಬಡಿಸುವಾಗ ಸಲ್ಪ ನಿಂಬೆ ರಸ ಹಾಕಿದರೆ ರುಚಿ ಹೆಚ್ಚುತ್ತದೆ