Blog : Big Releases In August - ಆಗಸ್ಟ್ ಸಂಭ್ರಮ
Big Releases In August - ಆಗಸ್ಟ್ ಸಂಭ್ರಮ

ಅಗಸ್ಟ್ ನಲ್ಲಿ ಒಂದೆಡೆ ಶ್ರಾವಣ ಮಾಸದ ಸಂಭ್ರಮ ಜೋರಾಗಿದ್ದರೆ, ಚಿತ್ರರಂಗದಲ್ಲಿ ಇನ್ನು ದೊಡ್ಡ ಸಂಭ್ರಮ ಬರಲಿದೆ. ಅನೇಕ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ಆ ತಿಂಗಳಲ್ಲಿ ತೆರೆಗೆ ಅಪ್ಪಳಿಸಲಿವೆ.
ಪೈಲವಾನ್:
ಕಿಚ್ಚ ಸುದೀಪ್ ನಾಯಕರಾಗಿರುವ 'ಪೈಲ್ವಾನ್' ಆಗಸ್ಟ ೯ಕ್ಕೆ ಬಿಡುಗಡೆ ಆಗಲಿದೆ. ಕನ್ನಡ ಸೇರಿದಂತೆ ತಮಿಳು,ತೆಲುಗು,ಹಿಂದಿ,ಮಲಯಾಳಂ ಭಾಷೆಗಳಲ್ಲೂ 'ಪೈಲವಾನ್' ತೆರೆ ಕಾಣಲಿದೆ.

ಕುರುಕ್ಷೇತ್ರ :
ದರ್ಶನ ಅಭಿನಯದ ಬಹು ತಾರಾಗಣದ ಬಹು ನಿರೀಕ್ಷಿತ ಚಿತ್ರ 'ಕುರುಕ್ಷೇತ್ರ ' ಸಹ ಆಗಸ್ಟ್ ೯ ಕ್ಕೇ ಬರಲಿದೆ. ಇದು ಕೂಡ ಬಹು ಭಾಷಾ ಚಿತ್ರವಾಗಿದ್ದು ದೊಡ್ಡ ನಿರೀಕ್ಷೆ ಯೊಂದಿಗೆ ಬರಲಿದೆ.

ಸಾಹೋ :
ಪ್ರಭಾಸ್ ಹೀರೋ ಆಗಿರುವ 'ಸಾಹೋ' ಆಗಸ್ಟ್ ೧೫ ಕ್ಕೆ ತೆರೆಗೆ ಬರಲಿದೆ. ತೆಲುಗು ಹಾಗು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ.

ಮಿಷನ್ ಮಂಗಲ್  :
ಅಕ್ಷಯಕುಮಾರ್ ಅಭಿನಯದ ಹಿಂದಿ ಚಿತ್ರ ಆಗಸ್ಟ್ ೧೫ಕ್ಕೆ ತೆರೆಕಾಣಲಿದೆ. ಅಕ್ಷಯಕುಮಾರ್ ಅವರ ಎಲ್ಲ ಚಿತ್ರಗಳು ಈಗ ಹಿಟ್ ಆಗುತ್ತಿರುವದು ಗಮನಾರ್ಹ .

ನೇರಿಕೊಂಡ ಪಾರ್ವಿ :
ಅಜಿತ್ ಅಭಿನಯದ ತಮಿಳ ಚಿತ್ರ ಕೂಡ ಆಗಸ್ಟ್ ಎರಡನೇ ವಾರದಲ್ಲಿ ಬರಲಿದೆ. ಇದು ಹಿಂದಿ 'ಪಿಂಕ್ ' ಚಿತ್ರದ ರಿಮೇಕ್ ಆಗಿದ್ದು ಬಹಳ ನಿರೀಕ್ಷೆ ಇಟ್ಟುಕೊಂಡು ಬರಲಿದೆ.

ಅಂತೂ ಘಟಾನುಘಟಿಗಳ ಚಿತ್ರಗಳು ಬಂದು ಒಳ್ಳೆಯ ಪೈಪೋಟಿ ಇರುವ ನಿರೀಕ್ಷೆ  ಇದೆ.