Blog : ಸಿನಿಪ್ರಿಯರಿಗೆ ಭರ್ಜರಿ ನಾಯಕನ ಪೊಗರು- Druva Sarja's pogaru
ಸಿನಿಪ್ರಿಯರಿಗೆ  ಭರ್ಜರಿ ನಾಯಕನ ಪೊಗರು- Druva Sarja's pogaru

ಕೊರೊನಾ ಹಾವಳಿ ಕಾರಣ ಕೆಲವು ದಿನಗಳಿಂದ ಯಾವ ಚಿತ್ರವೂ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಆಗಿರಲಿಲ್ಲ.ಈಗ ಧ್ರುವ ಸರ್ಜಾ ನಟನೆಯ " ಪೊಗರು" ಚಿತ್ರವೂ ಕನ್ನಡ,ತಮಿಳ,ತೆಲುಗು ಮೂರು ಭಾಷೆಗಳಲ್ಲಿ ಹಾಗೂ ನಾಲ್ಕು ರಾಜ್ಯದ ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ.
ಈ ಚಿತ್ರದಲ್ಲಿ ದಬ್ಬಾಳಿಕೆ ಮಾಡಿಯೇ ಗೌರವ ಪಡೆಯಬೇಕು ಎಂಬುದನ್ನು ನಂಬಿದ ನಾಯಕನಿಗೆ ಚಿತ್ರದುದ್ದಕ್ಕೂ ಮಾನವೀಯತೆ ಹುಟ್ಟುವ, ಪ್ರೀತಿ-ಪ್ರೇಮಗಳನ್ನು ಅರ್ಥಪಡಿಸುವ ಕೆಲವು ಸನ್ನಿವೇಶಗಳು ಸೃಷ್ಟಿಯಾಗಿ ಮಾನವೀಯ ಮೌಲ್ಯಗಳನ್ನೂ ಹೊಂದಿರುವ ಯುವಕನಾಗಿ ಪರಿವರ್ತನೆ ಹೊಂದುವಲ್ಲಿ ಸಹಾಯಕ ವಾಗುತ್ತವೆ.
ಪೊಗರು ಒಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಿದ್ದು,ಧ್ರುವನಿಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದಾರೆ.ನಂದಕಿಶೋರ ನಿರ್ದೇಶನದ ಈ ಚಿತ್ರದಲ್ಲಿ ಧನಂಜಯ,ರಾಘವೇಂದ್ರ ರಾಜಕುಮಾರ್ ,ಪವಿತ್ರಾ ಲೋಕೇಶ್ ನಟಿಸಿದ್ದಾರೆ.