Blog : ಪೋಷಕಾಂಶಗಳ ಆಗರ ಮಾವಿನಹಣ್ಣು (health benefits of mangoes)
ಪೋಷಕಾಂಶಗಳ ಆಗರ ಮಾವಿನಹಣ್ಣು (health benefits of mangoes)


      ಏಪ್ರಿಲ್ ತಿಂಗಳು ಬಂತೆಂದರೆ ನಮಗೆಲ್ಲಾ ನೆನಪಾಗುವುದು ರಸಭರಿತ ಮಾವಿನ ಹಣ್ಣು.ಮಾವಿನಹಣ್ಣಿನಲ್ಲಿ ವಿಟಮಿನ್ ಎ,ವಿಟಮಿನ್ ಸಿ,ತಾಮ್ರ ಮತ್ತು ಫೋಲೇಟ್ ಎಲ್ಲವೂ ಹೇರಳವಾಗಿ ಇರುವದರಿಂದ ಇದನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ.ಈ ಸಮೃದ್ಧಿ ಹಣ್ಣು ಕೇವಲ ಒಂದು ಶೇಕಡಾ ಕೊಬ್ಬನ್ನು ಹೊಂದಿದೆ.
       ಮಾವಿನ ಹಣ್ಣಿನಿಂದ ಸೀಕರಣೆ,ಮಿಲ್ಕ್‌ಶೇಕ್,ಜ್ಯೂಸ್, ಐಸ್ ಕ್ರೀಮ್ ಮಾಡಿ ಸೇವಿಸಬಹುದು.
           ಈ ಹಣ್ಣಿನಲ್ಲಿ ಕ್ವೆರ್ಸೆಟಿನ್,ಫಿಸೆಟಿನ್,ಐಸೊಕ್ವೆರ್ಸಿಟ್ರಿನ್, ಅಸ್ಟ್ರಾಗಾಲಿನ್, ಗ್ಯಾಲಿಕ್ ಆಸಿಡ್ ಮತ್ತು ಮೀಥೈಲ್ ಗ್ಯಾಲೇಟ್ ನಂತಹ ಆಂಟಿ ಆಕ್ಸಿಡೆಂಟು ಅಥವಾ ಉತ್ಕರ್ಷಣ ನಿರೋಧಕ ಗುಣ ಇರುವ ಪೋಷಕಾಂಶಗಳಿರುವ ಕಾರಣ ನಮ್ಮ ದೇಹವನ್ನು ಸ್ತನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ರಕ್ತದ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತವೆ.
          ಈಹಣ್ಣಿನಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಸಹಾಯ ಮಾ ಡುವುದಲ್ಲದೇ,ಜೀರ್ಣಾಂಗವ್ಯೂಹವನ್ನು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡುತ್ತದೆ.ಈ ಹಣ್ಣಿನಲ್ಲಿ ವಿಟಮಿನ್ ಸಿ, ಕರಗುವ ನಾರು ಮತ್ತು ಪೆಕ್ಟಿನ್ ಇದ್ದು, ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಆರೋಗ್ಯಕರ ಮಿತಿಗಳಲ್ಲಿ ಇರುವಂತೆ ನಿಯಂತ್ರಿಸಲು ಸಹಾಯ ಮಾಡುತ್ತವೆ.
       ಮಾವಿನಹಣ್ಣು ತಿನ್ನುವದರಿಂದ ಸ್ಮರಣಶಕ್ತಿಯ ಹಾಗು ಏಕಾಗ್ರತೆಯನ್ನು ಹೆಚ್ಚಿಸಹುದು.ಈ ಹಣ್ಣಿನಲ್ಲಿರುವ ಉತ್ತಮ ಪ್ರಮಾಣದ ಕಬ್ಬಿಣದ ಅಂಶವು ರಕ್ತಹೀನತೆ ನಿವಾರಿಸಲು ಉತ್ತಮ ಪಾತ್ರವಹಿಸುತ್ತದೆ.
      ಈ ಹಣ್ಣುಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲದ ಕುರುಹುಗಳನ್ನೂ ಹೊಂದಿರುವುದರಿಂದ,ಇದು ನಮ್ಮ ದೇಹದ ಕ್ಷಾರೀಯ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಹೆಚ್ಚಾಗಿ ವಸಂತ ಕಾಲದಲ್ಲಿ ಸಿಗುವಂತಹ ಮಾವು ಆರೋಗ್ಯದ ಜೊತೆ ಹೆಂಗಳೆಯರ ಸೌಂದರ್ಯ ವೃದ್ಧಿಸುವಲ್ಲಿ ಸಹಾಯಮಾಡುತ್ತದೆ.