Blog : How To Earn Extra By Online Business At Home
How To Earn Extra By Online Business At Home

ಮನುಷ್ಯನ ಆಸೆಗಳಿಗೆ ಕನಸುಗಳಿಗೆ ಎಲ್ಲೆಯೇ ಇಲ್ಲ.. ಗಾಡಿ ತೊಗೋಬೇಕು, ಕಾರು ತೊಗೋಬೇಕು, ವಿದೇಶಕ್ಕೆ ಪ್ರವಾಸಕ್ಕೆ ಹೋಗಬೇಕು ಎಂಬ ಇತ್ಯಾದಿ ಆಸೆಗಳಿರುತ್ತವೆ. ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗ್ತಾ ಇದೆ ಬರುವ ಆದಾಯ ಬೇಸಿಕ್ ನೀಡ್ಸ್ ಗೇನೇ ಸಾಗಕೊದಿಲ್ಲ.
ಹಾಗಾದರೆ ನಮಗೆ ಇನ್ನೊಂದು ಆದಾಯ ಬೇಕು.
ಏನು ಮಾಡಬೇಕು,ಬಂಡವಾಳ ಹಾಕಲು ದುಡ್ಡಿಲ್ಲ ...
ಮನೆಯಲ್ಲಿಯೇ ಇದ್ದು ಮಹಿಳೆಯರಿಗೆ ಹಣಗಳಿಸಲು ಇಲ್ಲಿ ಕೆಲವು ಐಡಿಯಾಗಳನ್ನು ಕೊಟ್ಟಿದೆ... ಟ್ರೈ ಮಾಡಿ ನೋಡಿ ! ಸಕ್ಸಸ್ ಗ್ಯಾರಂಟೀ !!

೧. ಆನ್ಲೈನ್ ಅಡುಗೆ ಕ್ಲಾಸೆಸ್
ಅಡುಗೆಯಲ್ಲಿ ಪರಿಣತಿ ಇರುವವರು ಆನ್ಲೈನ್ ನಲ್ಲಿ ಕ್ಲಾಸೆಸ್ ಹೇಳಬಹುದು . ಈ ತರಗತಿಗಳನ್ನು ಒಬ್ಬರಿಗೆ ಅಥವಾ ಹಲವಾರು ಜನರಿಗೆ ಏಕಕಾಲದಲ್ಲಿ ಹೇಳಬಹುದು.

೨. ಕೇಕ್ ಡಿಸೈನ್
ಹುಟ್ಟಿದಹಬ್ಬ ಅಥವಾ ಇನ್ನ್ಯಾವದೋ ಸಂಧರ್ಭದಲ್ಲಿ ಕೇಕ್ ಕಟ್ ಮಾಡುವ ಕಾರ್ಯಕ್ರಮ ಇದ್ದಾಗ, ನೀವು ಮನೆಯಲ್ಲಿ ಚಾಕೇನ ವಿನ್ಯಾಸ (ಡಿಸೈನ್) ಮಾಡಿ ಕೊಡಬಹುದು. ನಿಮ್ಮ ಕಲೆ ಎಷ್ಟು ಚೆನ್ನಾಗಿದೇನೋ, ಕ್ರಿಯಾತ್ಮಕವಾಗಿದೆನೊ ಅಷ್ಟು ದುಡ್ಡು ಚಾರ್ಜ್ ಮಾಡಬಹುದು

೩. ಕ್ರಾಫ್ಟ್ ಬಿಸಿನೆಸ್
ಮನೆಯಲ್ಲಿಯೇ ಚಿತ್ರಗಾರಿಕೆ, ಹೊಲಿಗೆ, ಕೃತಕ ಸರಗಳು, ಕಿವಿಯ ಓಲೆಗಳು, ಪೇಪರ್ ಕಟಿಂಗ್ ಇತ್ತ್ಯಾದಿ ಕಲೆ ಇದ್ದಾರೆ ಮಾಡಿ ಆನ್ಲೈನ್ ನಲ್ಲಿ ಮಾರಬಹುದು. facebook ಅಥವಾ whatsapp ನಲ್ಲಿ ಮಾರಬಹುದು .