Blog : ಕಿರಿಕ್ ಹುಡುಗಿಯ ಒಂದಲ್ಲ, ಎರಡಲ್ಲ, ಮೂರು ಸಿನಿಮಾಗಳು ತೆರೆ ಕಾಣಲಿವೆ !!! Kirik Hudugi has three movies coming
ಕಿರಿಕ್  ಹುಡುಗಿಯ ಒಂದಲ್ಲ, ಎರಡಲ್ಲ,  ಮೂರು ಸಿನಿಮಾಗಳು ತೆರೆ ಕಾಣಲಿವೆ !!! Kirik Hudugi has three movies coming

ಕಳೆದ ವರ್ಷ ಇದೆ ಸಮಯಕ್ಕೆ ರೀಲೀಸ್ ಆಗಿ ಜನಪ್ರಿಯ ಗಳಿಸಿದ ಚಿತ್ರ "ಕಿರಿಕ್ ಪಾರ್ಟಿ" ಯಲ್ಲಿ "ಸಾನ್ವಿ " ಪಾತ್ರಕ್ಕೆ ಜೀವ ತುಂಬಿ ಜನ ಮನ್ನಣೆ ಗಳಿಸಿದ ನಟಿ "ರಶ್ಮಿಕಾ ಮಂದಣ್ಣ "ಮತ್ತೆ ಒಂದಲ್ಲ ಎರಡಲ್ಲ ಮೂರು ಸಿನೆಮಾಗಳೊಂದಿಗೆ ಬೆಳ್ಳಿಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ .ಪುನೀತ್ ರಾಜ್ಕುಮಾರ್ ಜತೆ ‘ಅಂಜನಿಪುತ್ರ’ ಹಾಗೂ ಗಣೇಶ್ ಜತೆ ‘ಚಮಕ್’ನಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಜತೆಗೆ ತೆಲುಗಿನ ‘ಚಲೋ’ ಚಿತ್ರದಲ್ಲೂ ಅವರಿದ್ದಾರೆ. ಈ ಎಲ್ಲ ಸಿನೆಮಾಗಳು ಇದೆ ಡಿಸೆಂಬರ್ ನಲ್ಲಿ ತೆರೆಕಾಣಲಿವೆ .
ರಶ್ಮಿಕಾ ಅವರು ‘ಅಂಜನಿ ಪುತ್ರ’ದಲ್ಲಿ ಶ್ರೀಮಂತ ಕುಟುಂಬದ ಹುಡುಗಿಯಾಗಿ ಬಣ್ಣ ಹಚ್ಚಿದ್ದಾರೆ .ಚಮಕ್’ನಲ್ಲಿ ತುಂಬ ಮೃದು ಸ್ವಭಾವದ ಗೃಹಿಣಿಯ ಪಾತ್ರ. ‘ಚಲೋ’ದಲ್ಲಿ ಕಾಲೇಜ್ಗೆ ಹೋಗುವ ಹುಡುಗಿ ಪಾತ್ರ. ಹೀಗೆ ಪ್ರತಿಯೊಂದು ಪಾತ್ರವು ವಿಭಿನ್ನ ವಾಗಿದ್ದು , ಪ್ರೇಕ್ಷಕರಿಗೆ ಮನರಂಜಿಸಲಿದೆ.