Blog : Manku Timmana Kagga | Purushaswatantrateya | Verse 13 | Meaning In Kannada | English
Manku Timmana Kagga | Purushaswatantrateya | Verse 13 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಹನ್ನೆರಡನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 13

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು? |
ಧರಣಿಗನುದಿನದ ರಕ್ತಾಭಿಷೇಚನೆಯೆ ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವದೆ - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 13 ರಅರ್ಥ

ಎಲ್ಲರಿಗೂ ಸ್ವತಂತ್ರ ಬಂದುದರ ಪರಿಣಾಮವೇನಾಗಿದೆ ? ಅವರುಗಳೆಲ್ಲಾ ಸಾಧಿಸಿದ್ದಾದರೂ ಏನು?
ಇದರಿಂದ ಆದ ಪರಿಣಾಮ ಕೇವಲ ಯುದ್ಧ, ಕಲಹ ಮತ್ತು ಈ ಭೂಮಿತಾಯಿಗೆ ಪ್ರತಿನಿತ್ಯವೂ ರಕ್ತದಿಂದ ಸ್ನಾನ ಅಷ್ಟೆ.


ಖಡ್ಗವನ್ನು ಹೂವಿನ ಮಾಲೆಯೆಂದು ಎಳೆದಾಡಿದರೆ ಆಗುವ ಪರಿಣಾಮ ಕೈಯೆಲ್ಲಾ ರಕ್ತಸಿಕ್ತವಾಗುತ್ತದೆಯೋ ಹೊರತು ಅದೇನು ಹೂವಿನ ಸುಗಂಧವನ್ನು ಪಸರಿಸುತ್ತದೆಯಾ?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Twelth verse. 

 

Mankutimmana Kagga Verse -13 In English

Purushasvatantrateya paramasiddhiyadenu? |
Dharaniganudinada raktabhishechaneye? ||
Karavalavanu pushpasaravendu seledade |
parimalava susuvade - Mankutimma ||

 

Mankutimmana Kagga Verse -13 MeaninIn English

What is the effect of free will for all? What have they accomplished?
The result is just war, strife and representation of this land, bathed in blood.
If the sword is drawn as a flower garland, will the effect be a bloody hand, but will it smell a flower?