Blog : ಕೊರೊನಾ ನಿಯಂತ್ರಣಕ್ಕೆ ಅರಿಶಿನ ಹಾಲು (Turmeric Milk)
ಕೊರೊನಾ ನಿಯಂತ್ರಣಕ್ಕೆ ಅರಿಶಿನ ಹಾಲು (Turmeric Milk)

ಆಟಆಡುವಾಗ ಮಗು ಬಿದ್ದು ಕಾಲಿಗೆ ತೆರಚಿಕೊಂಡು ಅಳುತ್ತ ಬಂದಾಗ ಅಮ್ಮ ಮಗುವನ್ನು ಸಮಾಧಾನ ಪಡಿಸುತ್ತಾ ರಕ್ತಸ್ರಾವ ನಿಲ್ಲಲು ಅರಿಶಿನ ಲೇಪಿಸುತ್ತಾಳೆ.ಋಷಿಮುನಿಗಳ ಕಾಲದಿಂದಲೂ ಶುಭ ಎಂದು ಕರೆಯುವ,ನಿತ್ಯ ಸಂಜೀವಿನಿ ಆಗಿರುವ ಅರಿಶಿನ ಕೊರೊನಾ ವೈರಸ್ ಜೊತೆಗೆ ಹೋರಾಡಲು ಯೋಧನಂತೆ ನಿಂತಿದೆ.

  ಬಂಗಾರದ ಬಣ್ಣದಲ್ಲಿ ಕಂಗೊಳಿಸುವ ಅರಿಶಿನ ಮನುಷ್ಯನ ದೇಹದಲ್ಲಿ ಸೂಪರ್ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಯೋಟಿಕ್ ಮತ್ತು ಆಂಟಿ ವೈರಸ್ ಆಗಿ ಕೆಲಸ ಮಾಡುತ್ತದೆ.
ಅರಿಶಿನವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಕೊರೊನಾ ವೈರಾಣುವಿನಿಂದ ಆಗುವ ಸೋಂಕನ್ನು ತಡೆಗಟ್ಟಬಹುದು ಎಂದು ಇಂದಿನ ವೈದ್ಯರು ನಿರ್ಧಾರಕ್ಕೆ ಬಂದಿದ್ದಾರೆ.
ದೇಶದಲ್ಲಿ ಅತಿ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಜೊತೆಗೆ ಹೋರಾಡಲು ಸೋಂಕಿತರಿಗೆ ಕೋವಿಶೀಲ್ಡ್, ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಯೊಂದಿಗೆ ಅರಿಶಿನ ಹಾಲನ್ನು ಕುಡಿಯಲೂ ಇಂದಿನ ವೈದ್ಯರೇ ಸಲಹೆ ನೀಡುತ್ತಿದ್ದಾರೆ.

ಅರಿಶಿನ ಹಾಲು ತಯಾರಿಸುವುದು ಹೇಗೆ?

ಬೇಕಾಗುವ ಪದಾರ್ಥಗಳು

1 ಟೀ ಚಮಚ ಅರಿಶಿನ

1 ಕಪ್ ಹಾಲು

1 ಟೀ ಚಮಚ ದಾಲ್ಚಿನ್ನಿ ಪುಡಿ

1 ಟೀ ಚಮಚ ಶುಂಠಿ ಪುಡಿ

ಕಾಳುಮೆಣಸಿನಪುಡಿ ಚಿಟಿಕೆಯಷ್ಟು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೆರೆಸಿ ಕುದಿಸಿರಿ

ನಂತರ ಕಡಿಮೆ ಮಾಡಿದ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.

ಸೋಸಿ, ಕೊನೆಗೆ ಇದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.