Blog : Manku Timmana Kagga | Eradumirabahudu | Verse 29 | Meaning In Kannada | English
Manku Timmana Kagga | Eradumirabahudu | Verse 29 | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಇಪ್ಪತ್ತೆಂಟನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 29

ಎರಡುಮಿರಬಹುದು ದಿಟ ; ಶಿವರುದ್ರನಲೇ ಬೊಮ್ಮ |
ಕರವೊಂದರಲಿ ವೇಣು, ಶಂಖವೊಂದರಲಿ ||
ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವದು |
ಒರುವನಾಡುವುದೆಂತು - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 29 ರ ಅರ್ಥ

ದೇವರು ಒಬ್ಬನೇ. ಅದು ತತ್ವ. DVG ಅವರಿಗೆ ಈ ಪದ್ಯದಲ್ಲಿ ಜಿಜ್ಞಾಸೆ.

ಭಗವಂತನು ಎರಡು ವಿಧ. ಹಾಗೆ ಕಾಣಿಸಿಕೊಳ್ಳುತ್ತಾನೆ - ಅವನು ಮನೋನಿಯಾಮಕ ಶಿವ ಆಗಿರಬಹುದು. ಹಾಗೇ ಲಯ ನಿಯಾಮಕ ರುದ್ರ ಆಗಿರಬಹುದು.

ಅವನ ಒಂದು ಕೈಯಲ್ಲಿ ಕೊಳಲು. ಅದರ ನಾದ. ಜಗಕೆ ಮೋಡಿ. ಭಕ್ತರ ಜೊತೆ ಲೀಲೆ.
ಇನ್ನೊಂದು ಕೈಯಲ್ಲಿ ಶಂಖ. ಅದರ ನಾದ. ರಣ ಘೋಷ. ರಕ್ಕಸರ ಜೊತೆ ಯುದ್ಧ.

ಇದೆಲ್ಲ ಪರಮಾತ್ಮನ ಆಟ.

ನಿಜ. ಎರಡು ಬೆರಳುಗಳಿಂದ ಚಿಟಿಕೆ. ಅದು ಸಾಧ್ಯ.ಎರಡು ಕೈ ಬೇಕಿಲ್ಲ.

ಆದರೆ ಆಟ ಆಡಲು ಒಬ್ಬನೇ ಸಾಕೆ? ಇನ್ನೊಬ್ಬರಾದರೂ ಬೇಕಲ್ಲವೇ?

ಏನಿದು ಆ ದೇವರ ಕ್ರೀಡೆ?

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Twenty Eighth verse. 

 

Mankutimmana Kagga Verse -29 In English

Eradumirabahudu dita; shivarudranale bomma |
Karavondarali venu, shankhavondarali ||
Beralgaleradanumire kai chitikeyaduvadu |
Oruvanaduvudentu - Mankutimma ||

 

Mankutimmana Kagga Verse -29 MeaninIn English

God is one. That is the principle. DVG is intriguing about it in this verse.


God is of two types. At least Appears like that - He may be Shiva the mind-controller. He may appear as Maha Rudra. The destroyer.  

A flute in one of his hands. He plays. Charm to the world. Leela with devotees.

Conch on the other hand. He blows. War cry. Battle with monsters.


All this is God's play.


True. Pinch with two fingers. It is possible. No need for two hands.

But is one enough to play the game? Don't you want someone else?


What is God's game?

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)