Blog : Manku Timmana Kagga | Verse 32 | Parabommani | Meaning In Kannada | English
Manku Timmana Kagga | Verse 32 | Parabommani | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮೂವತ್ತೊಂದನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 32

ಪರಬೊಮ್ಮನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೋ ನಿದ್ದೆ ಕಲಾರವೋ ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ ? - ಮಂಕುತಿಮ್ಮ ||

 

ಮಂಕುತಿಮ್ಮನ ಕಗ್ಗ ಪದ್ಯ- 32 ರ ಅರ್ಥ

ಈ ಜಗತ್ತಿನ ಸೃಷ್ಟಿ ಕರ್ತ ಪರಬ್ರಹ್ಮ. ಅದರ ರಚನೆಕಾರ.
ಹೌದಾದರೂ ಈ ಸೃಷ್ಟಿ ಅವನ ಬರೀ ಆಟವೋ? ಅದರಿಂದ ಅವನಿಗೆ ಕೇವಲ ಮೋಜೋ ? ಏಕೆಂದರೆ ಸೃಷ್ಟಿಯಿಂದ ಅವನಿಗೇನಾಗಬೇಕಾಗಿಲ್ಲ.

ಪರಬ್ರಹ್ಮನ ಆಟ ಅಲ್ಲವೇ?
ಹಾಗಾದರೆ ಬರೀ ನಿದ್ದೆಯಲ್ಲಿ ಕನವರಿಸುತ್ತಿದ್ದಾನೆಯೇ? ಅಂದರೆ ಬ್ರಹ್ಮ ಮಲಗುತ್ತಾನೆಯೇ? ಸೃಷ್ಟಿ ಕೇವಲ ಅವನ ಕನಸೇ?

ಈ ಜಗತ್ತಿನ ಪರಿ- ಅದು ತಿಳಿಯಲೊಲ್ಲದು. ಸೃಷ್ಟಿ ಮಾಡಿದವ ಮೂರ್ಖನೇ? ಆ ಸೃಷ್ಟಿಯ ಗುರಿ ಏನು? ಯಾಕೆ ಸೃಷ್ಟಿ ಮಾಡಿದ ಪರಬ್ರಹ್ಮ ?

ಅದರ ಉದ್ದೇಶ, ನಿಯಮ, ಗುರಿ ಏನೂ ಗೊತ್ತಾಗತ್ತಿಲ್ಲವಲ್ಲ ?!

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Thirty First verse. 

 

Mankutimmana Kagga Verse -32 In English

Parabommani jagava rachisidavanadodadu |
bariyatavo kanaso nidde kalaravo? ||
Marulanavanalladode niyamavondirabeku |
gurigottadenihudo ? - Mankutimma ||

 

Mankutimmana Kagga Verse -32 MeaninIn English

Parabrahma is the creator of this world. 

But is this creation just his game? Is it just entertainment  for him? Because Brahma does not have any benefit from this creation.


Isn't it Brahma's game?

If not, is he just dreaming in his sleep? Does Brahma sleep? Creation is just his dream?


This world is a puzzle. Is the creator stupid? What is the purpose of that creation? Why did Parabrahma create this world?

Nothing is known about its purpose, rule, goal?!

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)