Blog : Manku Timmana Kagga | Verse 38 | Bereyisi | Meaning In Kannada | English
Manku Timmana Kagga | Verse 38 | Bereyisi | Meaning In Kannada | English

ಮಂಕುತಿಮ್ಮನ ಕಗ್ಗ
ರಚನೆ: ಶ್ರೀ ಡಿ. ವಿ.ಗುಂಡಪ್ಪ (ಡಿವಿಜಿ)

ಮೂವತ್ತೇಳನೇಯ ಪದ್ಯ ಆಗಲೇ ನೋಡಿದ್ದೇವೆ.

 

ಮಂಕುತಿಮ್ಮನ ಕಗ್ಗ ಪದ್ಯ- 38

ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |
ತೋರಿಪೂಸರವಳ್ಳಿಯಂತೇನು ಬೊಮ್ಮ||
ಪೂರ ಮೈದೋರೆನೆಂಬಾ ಕಪಟಿಯಂಶಾವ 
ತಾರದಿಂದಾರ್ಗೇನು ? - ಮಂಕುತಿಮ್ಮ||

 

ಮಂಕುತಿಮ್ಮನ ಕಗ್ಗ ಪದ್ಯ- 38 ರ ಅರ್ಥ

ಊಸರವಳ್ಳಿ ಮೈ ಬಣ್ಣ ಬದಲಿಸುವದು. ನಿಮಿಷ ನಿಮಿಷಕ್ಕೆ.
ಸೃಷ್ಟಿಕರ್ತ ಬ್ರಹ್ಮನೂ ಬಣ್ಣ ಬದಲಿಸುವ. ಅವನೂ ಊಸರವಳ್ಳಿಯೇ?

ಬ್ರಹ್ಮನ ಪೂರ್ಣ ಅರಿವು ನಮಗಾಗದು. ಅಸಾಧ್ಯ. ನಾವು ಮಾನವರು. ಇದರ ಅರ್ಥ ಅವನು ಪೂರ್ಣ ತನ್ನನ್ನು ತಾನು ನಮಗೆ ತೋರಗೊಡವುದಿಲ್ಲ. ಕೆಲ ಭಾಗ ಮಾತ್ರ ತೋರುತ್ತಾನೆ. ಇದು ಮೋಸ . ಅಲ್ಲವೇ?

ಈ ಮೋಸದಿಂದ ನಮೆಗೇನೂ ಲಾಭವಿಲ್ಲ. ನಷ್ಟವಿಲ್ಲ.

-----------------------------------------------------------------------

Manku Timmana Kagga In Englilsh

Written By : Shri D.V.Gundappa (DVG)

 

We have already seen Thirty Seventh verse. 

 

Mankutimmana Kagga Verse -38 In English

Bereyisi nimishanimishakamodalabannagala |
toripoosaravalliyantenu bomma ||
poora maidorenemba kapatiyanshava |
taradindargenu? - Mankutimma ||

 

Mankutimmana Kagga Verse -38 MeaninIn English

Chameleons change color. Minute by minute.
Creator Brahma also changes his color. Is he a chameleon too?

We cannot fully realize Brahman.Impossible.We are humans. This means that he does not show himself to us in full.

Only some part is visible.This is cheating.Isn't it ?

We have nothing to gain from this deception. Nothing to loose.

 

See other Verses of Makutimmana Kagga By Clicking Below Links

Verse 1 (ಪದ್ಯ 1) Verse 2 (ಪದ್ಯ 2) Verse 3 (ಪದ್ಯ 3) Verse 4 (ಪದ್ಯ 4) Verse 5 (ಪದ್ಯ 5) Verse 6 (ಪದ್ಯ 6)
Verse 7 (ಪದ್ಯ 7) Verse 8 (ಪದ್ಯ 8) Verse 9 (ಪದ್ಯ 9) Verse 10 (ಪದ್ಯ 10) Verse 11 (ಪದ್ಯ 11) Verse 12 (ಪದ್ಯ 12)
Verse 13 (ಪದ್ಯ 13) Verse 14 (ಪದ್ಯ 14) Verse 15 (ಪದ್ಯ 15) Verse 16 (ಪದ್ಯ 16)  Verse 17 (ಪದ್ಯ 17)  Verse 18 (ಪದ್ಯ 18)
Verse 19 (ಪದ್ಯ 19)  Verse 20 (ಪದ್ಯ 20)  Verse 21 (ಪದ್ಯ 21) Verse 22 (ಪದ್ಯ 22)  Verse 23 (ಪದ್ಯ 23)  Verse 24 (ಪದ್ಯ 24)
Verse 25 (ಪದ್ಯ 25)  Verse 26 (ಪದ್ಯ 26)   Verse 27 (ಪದ್ಯ 27)  Verse 28 (ಪದ್ಯ 28)  Verse 29 (ಪದ್ಯ 29)  Verse 30 (ಪದ್ಯ 30)
Verse 31 (ಪದ್ಯ 31)  Verse 32 (ಪದ್ಯ 32)  Verse 33 (ಪದ್ಯ 33)  Verse 34 (ಪದ್ಯ 34)  Verse 35 (ಪದ್ಯ 35)  Verse 36 (ಪದ್ಯ 36)
Verse 37 (ಪದ್ಯ 37)